ಕಟ್ಟುಬಂಧ ಚಿಕಿತ್ಸೆ : ಬೆನ್ನುಗಂಬ, ಎದೆಗೂಡು, ಹೊಟ್ಟೆಕುಳಿ ಮತ್ತಿತರ ಅಂಗಾಂಗಗಳ ತಂತುಗಟ್ಟುಗಳು (ಲಿಗಮೆಂಟ್ಸ್‌). ಮುದುರಿಕೊಂಡೋ ಕುಗ್ಗಿಯೋ ಬಹಳಷ್ಟು ರೋಗಳು ಏಳುವುವೆಂಬ ತತ್ತ್ವದ ಮೇಲೆ, ಮದ್ದುಗಳನ್ನು ಕೊಡದೆಯೇ ಚಿಕಿತ್ಸೆಗಾಗಿ ಮಾಡುವ ಕೈಸರಿಪಡಿಗೆ (ನಕ್ಷಾಪ್ರತಿ) ಓಕ್ಲಿ ಸ್ಮಿತ್. (1907) ಈ ಚಿಕಿತ್ಸಾಕ್ರಮದ ಸ್ಥಾಪಕ. ಮುದುರಿ ಕುಗ್ಗಿ ಹಿಡಿದಿರುವ ಊತಕವನ್ನು ಹಿಗ್ಗಿಸಿ ಸಡಿಲಿಸುವುದರ ಮೂಲಕ ಸರಿಪಡಿಸುವುದೇ ಗುರಿ. ಮೈಯಲ್ಲಿ ಎಲ್ಲೆಲ್ಲಿ ಹೀಗೆ ಹಿಡಿದುಕೊಳ್ಳುತ್ತದೆ. ಅದನ್ನು ಹೇಗೆ ಬಿಡಿಸಬೇಕೆಂದು ತೋರುವ ಪಟಗಳು ಈ ಚಿಕಿತ್ಸೆಯಲ್ಲಿ ಮುಖ್ಯ.               *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ